A Community With High Expectation And High Academic Achievement

ಕನ್ನಡ ಕ್ಲಬ್

ಕೂಟ ಎನ್ನುವುದು  ಸಾಮಾನ್ಯ ಆಸಕ್ತಿ ಅಥವಾ ಗುರಿಯಿಂದ ಒಗ್ಗೂಡಿದ ಸಂಘವಾಗಿದೆ. ಕೂಟ ಎಂಬುದು ಸ್ವಯಂ  ಪ್ರೇರಿತ ಅಥವಾ ದತ್ತಿ ಚಟುವಟಿಕೆಗಳಿಗಾಗಿ ಅಸ್ತಿತ್ವದಲ್ಲಿ ಇರುವುದು. ಇದರಿಂದ ಉತ್ತಮ ಸಹ ಭಾಗಿತ್ವದ ಸಾಮಾಜಿಕತೆ ಬೆಳೆಸುವುದಾಗಿದೆ.

ಕ್ರಿಯಾಶೀಲ ಕನ್ನಡ ಕೂಟದ ಒಟ್ಟು ಸದಸ್ಯರು

ಅ.ನಂ ಸದಸ್ಯರ ಹೆಸರು ಹುದ್ದೆ ಅರ್ಹತೆ ತರಗತಿಯ ನಿರ್ವಹಣೆ ಶರಾ
ಸಂಭಾಜಿ ಎಸ್ ಕದಂ ಸದಸ್ಯರು ಬಿಎ ಬಿ ಎಡ್ IX   X
ಪ್ರತಿಕ್ಷಾ ಪಿ ಪಾಟೀಲ ಸದಸ್ಯರು ಬಿಕಾಂ ಡಿ ಎಡ್ VI  VII
ವೀಣಾ ಎನ್  ತೋಲಗಿ ಸದಸ್ಯರು ಎನ್‌ಟಿಸಿ ಬಿಕಾಂ II III IV
ಪ್ರಕಾಶ ಎಂ ಮೇದಾರ್ ಸದಸ್ಯರು ಡಿ ಎಡ್  ಎಂ ಎ VII VIII
ಮೀನಾಕ್ಷಿ ವಿ ನಾಯಕ್ ಸದಸ್ಯರು ಪಿಪಿಟಿ ಟಿ I II
ಅಮೃತಾ ಎಂ ಇಟಿಗಿ ಸದಸ್ಯರು ಡಿ ಎಡ್ IV V

2023-24 ರಲ್ಲಿ ಕೈಗೊಂಡ ಕ್ರಿಯಾ ಚಟುವಟಿಕೆಗಳು ಮತ್ತು ಕನ್ನಡ ಕೂಟದಲ್ಲಿರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ .೮೫.

೧.ಭಾಷಣ ಸ್ಪರ್ಧೆ
೨.ನಾಟಕ ಸ್ಪರ್ಧೆ
೩.ಗಾಯನ ಸ್ಪರ್ಧೆ
೪.ಪ್ರತಿ 15 ದಿನಗಳಲ್ಲಿ ಒಂದು ಸಲ ಕನ್ನಡ ಕೂಟದ ವತಿಯಿಂದ ಮಕ್ಕಳ ಸರ್ವಾಂಗಿನ ಅಭಿವೃದ್ಧಿಗೆ ಶ್ರಮಿಸುವುದು.

ಕನ್ನಡ ಕೂಟದ ವತಿಯಿಂದ ಮುಂದೆ ಕೈಗೊಳ್ಳುವ ಕ್ರಿಯಾಯೋಜನೆಗಳು

೧.ಚಿತ್ರಕಲೆ ಸ್ಪರ್ಧೆ
೨.ರಸಪ್ರಶ್ನೆ ಸ್ಪರ್ಧೆ
೩.ರಂಗೋಲಿ ಸ್ಪರ್ಧೆ
೪.ವೇಷ ಭೂಷಣ ಸ್ಪರ್ಧೆ
೫.ಬರವಣಿಗೆ ಅಥವಾ ಪ್ರಬಂಧ ಸ್ಪರ್ಧೆ
೬.ಕಥೆ ಹೇಳುವ ಸ್ಪರ್ಧೆ
೭.ಸಾಹಿತ್ಯ ಬರವಣಿಗೆ ಸ್ಪರ್ಧೆ
೮. ಶಾಲಾವರಣದಲ್ಲಿ ಸ್ವಚ್ಛತಾ ಅಭಿಯಾನ
೯.ಕವನ ಸ್ಪರ್ಧೆ
೧೦. ಭಾಷಾ ಐತಿಹಾಸಿಕ ಸ್ಪರ್ಧೆ
೧೧.ನಾಡಿನ ಸ್ಮಾರಕವನ್ನು ತಯಾರಿಸುವ ಸ್ಪರ್ಧೆ
೧೨.ಕರ್ನಾಟಕ ರಾಜ್ಯೋತ್ಸವ ಅದ್ದೂರಿಯಿಂದ ಆಚರಿಸುವ ಮತ್ತು ರಾಜ್ಯದ ಸಂಸ್ಕಾರ ಸಂಸ್ಕೃತಿ ತಿಳಿಸಿ ಕೊಡುವುದು.
೧೩.ಕನ್ನಡ ಭಾಷಾ ದಿನವನ್ನಾಗಿ ಆಚರಿಸುವುದು.
೧೪.ಕೂಟದ ವತಿಯಿಂದ ಶಾಲಾ ಅವರಣದಲ್ಲಿ ಸ್ವಚ್ಛತಾ ಅಭಿಯಾನ.
೧೫. ಕೂಟದ ವತಿಯಿಂದ ಶಾಲೆಯ ಎಲ್ಲಾ ಮಕ್ಕಳ ಸರ್ವಾಂಗಿನ ಸ್ವಚ್ಛದ ಕಡೆಗೆ ಗಮನಿಸುವುದು
೧೬.ಪರಿಸರ ಜಾಗೃತಿ ಕಾರ್ಯಕ್ರಮ ರೋಗರುಜಿನ ಕಾರ್ಯಕ್ರಮ ಎಚ್ಐವಿಎಂತಹ ಭಯಾನಕ ರೋಗಗಳ ಕಾರ್ಯಕ್ರಮ.
೧೭.ವಿದ್ಯಾರ್ಥಿಗಳಲ್ಲಿ ಶುದ್ಧ ಬರಹ ಮತ್ತು ಬರಹದ ವೇಗದ ಸ್ಪರ್ಧೆ
೧೮.ಗ್ರಂಥಾಲಯ ಸದುಪಯೋಗದ ಜಾಗೃತಿ ಕಾರ್ಯಕ್ರಮ.

ಕನ್ನಡ ಕೂಟದ ವತಿಯಿಂದ ಸದಸ್ಯರು ವಿದ್ಯಾರ್ಥಿಗಳಿಂದ ಅಪೇಕ್ಷಿಸುವ ಅಂಶಗಳು:

೧.ವಿದ್ಯಾರ್ಥಿಗಳಲ್ಲಿ ಭಾಷಾಭಿಮಾನ ಬೆಳೆಸುವುದು.
೨.ಮಕ್ಕಳ ಹಕ್ಕುಗಳ ಸಂರಕ್ಷಣೆ.
೩.ವಿವಿಧ ಅಹಿತಕರ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದನ್ನು ತಡೆಗಟ್ಟುವುದು
೪.೧೦೦% ಪ್ರತಿಶತ ಹಾಜರಾತಿ ಮಾಡುವುದು
೫.ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸುವುದು
೬.ಮಕ್ಕಳಲ್ಲಿ ಉತ್ತಮ ಆಸಕ್ತಿಯನ್ನು ಮೂಡಿಸುವುದು.
೭.ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಭಾವನೆ ಬೆಳೆಸುವುದು.
೮.ವಿದ್ಯಾರ್ಥಿಗಳಲ್ಲಿ ಏಕತೆ ಮತ್ತು ಒಕ್ಕೂಟ ಭಾವನೆ ಬೆಳೆಸುವುದು
೯.ವಿದ್ಯಾರ್ಥಿಗಳಲ್ಲಿ ಆಸಕ್ತಿದಾಯಕ ಶಿಕ್ಷಣವನ್ನು ಬೆಳೆಸುವುದು
೧೦.ಕನ್ನಡ ಭಾಷಾ ಕೌಶಲ್ಯ ಬೆಳೆಸುವುದು.

ದಿನಾಂಕ:- 28/10/2022
ವಾರ_ಶುಕ್ರವಾರ

ಶಾಂತಿನಿಕೇತನ ಪಬ್ಲಿಕ್ ಶಾಲೆ, ಖಾನಾಪುರ್ ಎಂಬಲ್ಲಿ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಿದಂತ ನನ್ನ ನಾಡು ನನ್ನ ಹಾಡು ಎಂಬ ಕೋಟಿಕಂಠ ಗೀತ ಗಾಯನ ಕಾರ್ಯಕ್ರಮವನ್ನು ಗೌರವಾನ್ವಿತವಾಗಿ ಅತ್ಯಂತ ವಿಜ್ರಂಭಣೆಯಿಂದ ನೆರವರಿಸಲಾಯಿತು. ಮಾತಾಡ್ ಮಾತಾಡು ಕನ್ನಡ ನನ್ನ ನಾಡು ನನ್ನ ಹಾಡು ಎಂಬ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ ಆಯೋಜಿಸಿದಂತ ಕೋಟಿ ಕಂಠ ಗೀತ ಗಾಯನ ಕಾರ್ಯಕ್ರಮವನ್ನು ಮೊದಲನೆಯದಾಗಿ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳೊಂದಿಗೆ ಪ್ರಾರಂಭಿಸಲಾಯಿತು. ವೇದಿಕೆ ಮೇಲೆ ಉಪಸ್ಥಿತರಿದ್ದಂತಹ ಎಲ್ಲಾ ಗಣ್ಯಮಾನ್ಯರನ್ನು ಸ್ವಾಗತಿಸುವುದು ಮತ್ತು ಪ್ರಾಸ್ತಾವಿಕ ನುಡಿಗಳನ್ನು ನಮ್ಮ ಶಾಲೆಯ ಕನ್ನಡ ಸಹ ಶಿಕ್ಷಕರಾದಂತ ಸಂಬಾಜಿ ಕದಂ ಇವರಿಂದ ನೆರವೇರಿಸಿಕೊಡಲಾಯಿತು. ಒಂದು ಸಭೆಗೆ ಮುಖ್ಯ ಅಧ್ಯಕ್ಷರಾಗಿ ನಮ್ಮ ಶಾಂತಿನಿಕೇತನ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಸ್ವಾತಿ ವಾಲ್ವೆ ಮೇಡಂ ರವರು ಉಪಸ್ಥಿತರಿದ್ದರು.ಹಾಗೆ ಈ ಒಂದು ಸಭೆಗೆ ಅತಿಥಿಗಳಾಗಿ ನಮ್ಮ ಶಾಲೆಯ ಪಿ.ಆರ್.ಒ ಆದಂತಹ ಶ್ರೀಮತಿ ಮನಿಷಾ ಭೋಸ್ಲೆ ಹಾಗೂ ನಮ್ಮ ಶಾಲೆಯ ಹಿಂದಿ ವಿಭಾಗದ ಮುಖ್ಯಸ್ಥೆಯಾದ ಶ್ರೀಮತಿ ನಂದ ಮೇಡಂ ಅವರು ಅದೇ ರೀತಿಯಾಗಿ ಇತಿಹಾಸ ವಿಭಾಗದ ಮುಖ್ಯಸ್ಥೆ ಆದ ಶ್ರೀಮತಿ ಸಾಳುಂಕೆ ಮೇಡಂ ರವರು ಹಾಗೂ ನಮ್ಮ ಶಾಲೆ ಹಿರಿಯಶಿಕ್ಷಕಿಯಾದಂತ ಶ್ರೀಮತಿ ಸುವರ್ಣ ಕೊಟ್ರೆ ಮೇಡಂ ಹಾಗೂ ಇತಿಹಾಸ ಶಿಕ್ಷಕಿಯಾದ ಶ್ರೀಮತಿ ಅಕ್ಷಯಾ ಪಾಟೀಲ ಮತ್ತು ವಿಜ್ಞಾನ ವಿಭಾಗದ ಮುಖ್ಯಸ್ಥೆಯಾದ ಶ್ರೀಮತಿ ಸೋನಲ್ ಮೇಡಂ ಅವರು ಹಾಗೂ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಯಾದ ಶ್ರೀಮತಿ ವಿಕ್ಟೋರಿಯಾ ಮೇಡಂ ಅವರು ಮತ್ತು ಗಣಿತ ವಿಭಾಗದ ಮುಖ್ಯಸ್ಥರಾದ ಶ್ರೀ ಅನಿಲ್ ಕೊಲ್ಲಾಪುರೆ ಸರ್ ಅವರು ಮತ್ತು ಇನ್ನಿತರೆ ಶಾಲೆಯ ಸಿಬ್ಬಂದಿ ವರ್ಗಗಳು ಉಪಸ್ಥಿತರಿದ್ದರು.

ತದನಂತರ ಶಾಲೆಯ ಪ್ರಾಂಶುಪಾಲರಾದಂತಹ ಶ್ರೀಮತಿ ವಾಳ್ವೆ ಮೇಡಂ ರವರು ಮೊದಲನೇದಾಗಿ ನಾಡಗೀತೆಗಾಗಿ ಚಾಲನೆಯನ್ನು ದೊರಕಿಸಿಕೊಟ್ಟರು. ನಂತರ ಸುಮಾರು 500ಕ್ಕಿಂತ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಮತ್ತು ಸುಮಾರು 30 ಶಿಕ್ಷಕರ ಸಿಬ್ಬಂದಿಗಳೊಂದಿಗೆ ನಾಡಗೀತೆಯನ್ನು ಮೊದಲನೇದಾಗಿ ಅತ್ಯಂತ ಗೌರವಪೂರ್ವಕವಾಗಿ ಸುಮಧುರ ಕಂಠದೊಂದಿಗೆ ಹಾಡಲಾಯಿತು. ನಂತರ ಎರಡನೇದಾಗಿ ಸಹ ಶಿಕ್ಷಕರಾದಂತಹ ಸಂಭಾಜಿ ಕದಂ ರವರು ಕವಿ ಕುವೆಂಪುರವರ ಪರಿಚಯವನ್ನು ತಿಳಿಸುವುದರೊಂದಿಗೆ ಬಾರಿಸು ಕನ್ನಡ ಡಿಂಡಿಮವ ಎಂಬ ಹಾಡನ್ನು ಸಾಮೂಹಿಕವಾಗಿ ಹಾಡಲಾಯಿತು. ನಂತರ ಮೂರನೇ ಹಾಡುವನ್ನಾಗಿ ಕವಿ ಡಿಎಸ್ ಕರ್ಕಿ ರವರ ಸಂಕ್ಷಿಪ್ತ ಪರಿಚಯದೊಂದಿಗೆ ಹಚ್ಚು ಕನ್ನಡದ ದೀಪ ಎಂಬ ಹಾಡನ್ನು ಸಾಮೂಹಿಕವಾಗಿ ಹಾಡಲಾಯಿತು. ತದನಂತರ 4ನೇ ಹಾಡನ್ನು ಕವಿ ಚನ್ನವೀರ ಕಣವಿ ಅವರ ಸಂಕ್ಷಿಪ್ತ ಪರಿಚಯದೊಂದಿಗೆ ವಿಶ್ವ ವಿನೋತನ ವಿದ್ಯಾ ಚೇತನ ಎಂಬ ಹಾಡನ್ನು ಸುಮಧುರ ಕಂಠದೊಂದಿಗೆ ಸಾಮೂಹಿಕವಾಗಿ ಹಾಡಲಾಯಿತು. ಕೊನೆಯ ಹಾಡನ್ನಾಗಿ ನಾದಬ್ರಹ್ಮ ಹಂಸಲೇಖರವರನ್ನು ಪರಿಚಯಿಸುತ್ತಾ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡನ್ನು ಅತ್ಯಂತ ವಿಜ್ರಂಭಣೆಯಿಂದ ಅಚ್ಚುಕೊಟ್ಟಾಗಿ, ಸೊಗಸಾಗಿ, ಸಾಮೂಹಿಕವಾಗಿ ಹಾಡಲಾಯಿತು. ತದನಂತರ ಕೋಟಿ ಕಂಠ ಗೀತ ಗಾಯನ ಕಾರ್ಯಕ್ರಮದ ಸಂಕಲ್ಪ ವಿಧಿಯನ್ನು ನಮ್ಮ ಶಾಲೆಯ ಸಹ ಶಿಕ್ಷಕಿ ಆದಂತ ಶ್ರೀಮತಿ ಸ್ನೇಹ ದೇಸಾಯಿ ಅವರಿಂದ ನೆರವರಿಸಿಕೊಡಲಾಯಿತು ಜೊತೆಗೆ ಎಲ್ಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅದೇ ರೀತಿಯಲ್ಲಿ ಪ್ರಸ್ತುತಪಡಿಸಿದರು.

ನಂತರ ಕಾರ್ಯಕ್ರಮದ ಅಂತಿಮ ಘಟ್ಟ ಒಂದನಾರ್ಪಣೆಯನ್ನು ನಮ್ಮ ಶಾಲೆಯ ಕನ್ನಡ ಸಹ ಶಿಕ್ಷಕರಾದಂತಹ ಶ್ರೀ ಪ್ರಕಾಶ ಮಾದಾರ ರವರು ನೆರೆಹೊರಿಸಿಕೊಟ್ರು. ತದನಂತರ ಗೌರವಪೂರ್ವಕವಾಗಿ ಎಲ್ಲಾ ಗಣ್ಯಮಾನ್ಯರನ್ನು ಮತ್ತು ಪ್ರಿಯ ವಿದ್ಯಾರ್ಥಿ ವಿದ್ಯಾರ್ಥಿಗಳನ್ನು ಬೀಳ್ಕೊಡಲಾಯಿತು.

ಸ್ಥಳ:-ಖಾನಾಪುರ್ ಸಹಿ ಪ್ರಾಂಶುಪಾಲರು.
ರಾಜ್ಯೋತ್ಸವ ಕಾರ್ಯಕ್ರಮದ ಕಾರ್ಯವೈಕರಿ.
ದಿನಾಂಕ:-01-11-2022

ದಿನಾಂಕ:-01-11-2022
ವಾರ:-ಮಂಗಳವಾರ

ಶಾಂತಿನಿಕೇತನ ಪಬ್ಲಿಕ್ ಶಾಲೆ, ಖಾನಾಪುರ ಎಂಬಲ್ಲಿ 67ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಸಹಸ್ರಾರು ಸಂಖ್ಯೆಯಲ್ಲಿ ಗೌರವಾತ್ಮಕವಾಗಿ ಅತ್ಯಂತ ವಿಜ್ರಂಭಣೆಯಿಂದ ಆಚರಿಸಲಾಯಿತು. ಈ 67ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಕಾರ್ಯವೈಕರಿಯು ಈ ಕೆಳಗಿನಂತೆ ನಿರ್ವಹಿಸಿ ಕೊಡಲಾಗಿರುತ್ತದೆ. ಈ ಕರ್ನಾಟಕ ರಾಜ್ಯೋತ್ಸವ ಎಂಬ ಕಾರ್ಯಕ್ರಮವು ನಮ್ಮ ಶಾಂತಿನಿಕೇತನ್ ಪಬ್ಲಿಕ್ ಶಾಲೆ, ಖಾನಾಪುರ ಎಂಬ ಶಾಲಾ ಆವರಣದಲ್ಲಿ ಈ ಕಾರ್ಯಕ್ರಮದ ಸಭಾಂಗಣವನ್ನು ಗೌರವಾನ್ವಿತವಾದ ಎಲ್ಲಾ ನಮ್ಮ ಶಾಲೆಯ ಶಿಕ್ಷಕ ವೃಂದದ ಪರವಾಗಿ ಆಯೋಜಿಸಲಾಯಿತು. ಈ ಕಾರ್ಯಕ್ರಮದ ವೇದಿಕೆಯನ್ನು ಬ್ರಹ್ಮ ಕಮಲ ಹೂವಿಗೆ ಹೋಲಿಕೆಯಾಗುವಂತಹ ರೀತಿಯಲ್ಲಿ ಅತ್ಯಂತ ಗೌರವಪೂರ್ವಕವಾಗಿ ಶೃಂಗರಿಸಿ. ವೇದಿಕೆ ಮೇಲೆ ಬೆಳಿಗ್ಗೆ
ಸುಮಾರು 9 ಗಂಟೆಗೆ ಸಹಸ್ರಾರು ಸಂಖ್ಯೆಯ ವಿದ್ಯಾರ್ಥಿಗಳು, ಪಾಲಕರು, ಮತ್ತು ಸಿಬ್ಬಂದಿ ವರ್ಗಗಳು ಸೇರಿ ಕಾರ್ಯಕ್ರಮವನ್ನು ಮೊದಲನೇದಾಗಿ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿ ಯೊಂದಿಗೆ ಪ್ರಾರಂಭಿಸಲಾಯಿತು. ಈ 67ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಬ್ರಹ್ಮ ಕಮಲ ವೇದಿಕೆ ಮೇಲೆ ನಿರೂಪಣಾ ಕಾರ್ಯಕ್ರಮವನ್ನು ಶಾಲೆಯ ವಿದ್ಯಾರ್ಥಿನಿಯರಾದ ಕುಮಾರಿ ಸಹನಾ ಮತ್ತು ಪೂಜಾ ಪಂತರ್ ಇವರಿಂದ ನೆರವರಿಸಿಕೊಡಲಾಯಿತು. ಅದೇ ರೀತಿಯಾಗಿ ಸ್ವಾಗತ ಭಾಷಣ ಮತ್ತು ಪ್ರಸ್ತಾವಿಕ ನುಡಿಯನ್ನು ನಮ್ಮ ಶಾಲೆಯ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಸಂಭಾಜಿ ಕದಂ ಅವರಿಂದ ಅತ್ಯಂತ ಗೌರವಪೂರ್ವಕವಾಗಿ ನೆರವೇರಿಸಿ ಕೊಡಲಾಯಿತು.

ತದನಂತರ ಈ ಕಾರ್ಯಕ್ರಮದ ಮುಖ್ಯ ಅಧ್ಯಕ್ಷರಾಗಿ ಉಪಸ್ಥಿತರಿದ್ದಂತಹ ಗೌರವಾನ್ವಿತರಾದ ನಮ್ಮ ಶಾಲೆಯ ಪ್ರಾಂಶುಪಾಲರಾದಂತಹ ಶ್ರೀಮತಿ ಸ್ವಾತಿ ಕಮಲ್ ವಾಲ್ವೆ ಮೇಡಂ ರವರು ಉಪಸ್ಥಿತರಿದ್ದರು. ಹಾಗೆ ಈ ಒಂದು ಸಭೆಗೆ ಅತಿಥಿಯಾಗಿ ಉಪಸ್ಥಿತರಿದಂತಹ ನಮ್ಮ ಶಾಲೆಯ ಎಲ್ಲರ ಪ್ರೀತಿ ಪಾತ್ರರಾದಂತಹ, ಪಿ.ಆರ್.ಓ.ರಾದ ಶ್ರೀಮತಿ ಮನಿಷಾ ಭೋಸ್ಲೆ ಮೇಡಂ ರವರು ಉಪಸ್ಥಿತರಿದ್ದರು. ಹಾಗೆ ನಮ್ಮ ಶಾಲೆಯ ಹಿಂದಿ ಭಾಗದ ಮುಖ್ಯಸ್ಥೆ ಆದ ಶ್ರೀಮತಿ ನಂದಾ ಮೇಡಂ ರವರು ಹಾಗೆ ಇತಿಹಾಸ ವಿಭಾಗದ ಮುಖ್ಯಸ್ಥೆಯಾದ ಶ್ರೀಮತಿ. ಅನುಸೂಯ ಸಾಳುಂಕೆ ಮೇಡಂ ರವರು ಹಾಗೆ ನಮ್ಮ ಶಾಲೆ ಹಿರಿಯ ಇತಿಹಾಸ ಶಿಕ್ಷಕಿಯಾದ ಶ್ರೀಮತಿ. ಸುವರ್ಣ ಕುಟ್ರೆ ಮೇಡಂ ರವರು ಹಾಗೆ ಇತಿಹಾಸ ಶಿಕ್ಷಕಿಯಾದಂತ ಶ್ರೀಮತಿ. ಅಕ್ಷಯ ಪಾಟೀಲ. ವಿಜ್ಞಾನ ವಿಭಾಗದ ಮುಖ್ಯಸ್ಥೆಯಾದ ಶ್ರೀಮತಿ. ಸೋನಾಲ್ ಸಿಂಧೆ ಹಾಗೂ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ವಿಕ್ಟೋರಿಯಾ ಹಾಗೂ ಗಣಿತ ವಿಭಾಗದ ಮುಖ್ಯಸ್ಥರಾದ ಶ್ರೀ ಅನಿಲ್ ಕೊಲ್ಲಾಪುರೆ ಸರ್ ಅವರು ಮತ್ತು ಗಣಿತ ಶಿಕ್ಷಕನಾದ ಶ್ರೀ ಶ್ರೀಧರ್ ಬೆನಚ್ಮರಡಿ ಸರ್ ಅವರು ಹಾಗೂ ಪಾಲಕರಾದ ಮಾಜಿ ಸೈನಿಕನಾದ ರವೀಂದ್ರ ಪಂತರ ರವರು ಹಾಗೂ ಇನ್ನಿತರ ಪಾಲಕರು, ಶಿಕ್ಷಕರು. ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರ ಅನುಪ ಸ್ಥಿತಿಯಲ್ಲಿ ಕಾರ್ಯಕ್ರಮವನ್ನು ನಿರ್ವಹಿಸಲಾಯಿತು. ನಂತರ ಈ ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿ ದೇವಿಯ ಪ್ರತಿಮಾ ಪೂಜೆ ಮತ್ತು ದೀಪ ಪ್ರಜ್ವಲನ ಕಾರ್ಯಕ್ರಮವನ್ನು ನಮ್ಮ ನಾಡಿನ ಸಂಸ್ಕಾರ ಮತ್ತು ಸಂಸ್ಕೃತಿಯುತವಾಗಿ ಅತ್ಯಂತ ಭಕ್ತಿ ಭಾವದಿಂದ ನಮ್ಮ ಶಾಲೆಯ ಪ್ರಾಂಶುಪಾಲರಾದಂತಹ ಶ್ರೀಮತಿ ಸ್ವಾತಿ ಕಮಲ ಬಾಳ್ವೆ ಮೇಡಂ ರವರ ಅಮೃತ ಹಸ್ತದಿಂದ ನೆರೆವರಿಸಿಕೊಡಲಾಯಿತು. ತದನಂತರ ಪ್ರಾರ್ಥನಾ ಗೀತೆ ಎಂದಿಗೆ ಕಾರ್ಯಕ್ರಮಕ್ಕೆ ಚಾಲನೆಯನ್ನು ಮಾನ್ಯ ಪ್ರಾಂಶುಪಾಲರವರಿಂದ ನಡೆಸಿಕೊಡಲಾಯಿತು. ಹಾಗೆ ನಂತರ ವಿದ್ಯಾರ್ಥಿಗಳು ಹಲವು ಕನ್ನಡದ ಲೋಕಕ್ತಿಗಳೊಂದಿಗೆ ಕನ್ನಡ ನಾಡಿನ ಕನ್ನಡ ಭಾಷೆಯ ಸೌಭಾಗ್ಯವನ್ನು ಮೆರೆದರು. ಹಾಗೆ ನಾಡಿನ ಬಗ್ಗೆ ಹಲವು ಭಾಷಣಗಳು. ನೃತ್ಯಗಳು, ಮತ್ತು ಐತಿಹಾಸಿಕರೂವಾರಿಗಳ ಸುಮಾರು 30 ರೂಪಕಗಳನ್ನು ವಿದ್ಯಾರ್ಥಿಗಳಿಂದ ಮಾಡಿಸಲಾಯಿತು. ಹಾಗೆ ಶಿಕ್ಷಕರಿಂದ ಕರ್ನಾಟಕ ಇತಿಹಾಸದ ಬಗೆ ಭಾಷಣ ಜೋಗದ ಸಿರಿ ಬೆಳಕಿನಲ್ಲಿ ಹಾಡು ಮತ್ತು ನಾಡಿನ ಸಂಸ್ಕೃತಿಯ ಬಗ್ಗೆ ಹೆಳುರಪದ, ಶರಣರ ನುಡಿಗಳು, ಶಿಶುನಾಳ ಶರೀಫರ ತತ್ವಪದಗಳು ಇತ್ಯಾದಿ ಹಲವು ನಾಡಿನ ಸಂಸ್ಕೃತಿಯ ಬಗ್ಗೆ ತನ್ನ ಚಾಪನ್ನು ಮೂಡಿಸಿ ಕಾರ್ಯಕ್ರಮಕ್ಕೆ ಹೆಚ್ಚಿನ ಶೋಭೆಯನ್ನು ಗಿಟ್ಟಿಸಿದರು.

ತದನಂತರ ಕಾರ್ಯಕ್ರಮದ ಅಂತಿಮ ಘಟ್ಟ ವಂದನಾರ್ಪಣೆಯನ್ನು ನಮ್ಮ ಶಾಲೆಯ ಸಹ ಶಿಕ್ಷಕಿಯಾದ ಶ್ರೀಮತಿ ಪ್ರಿಯಾಂಕಾ ಮೇಡಮ್ ಅವರಿಂದ ನೆರೆಹೊರಿಸಿಕೊಡಲಾಯಿತು. ಹಾಗೆ ಎಲ್ಲಾ ಗೌರವಾನ್ವಿತ ಗಣ್ಯಮಾನ್ಯರನ್ನು ಮತ್ತು ಪಾಲಕರನ್ನು ಹಾಗೂ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಅತ್ಯಂತ ಗೌರವಪೂರ್ವಕವಾಗಿ ಬಿಳ್ಕೊಡಲಾಯಿತು.

ಸ್ಥಳ:-ಖಾನಾಪುರ
ದಿನಾಂಕ:-01-11-2022.
ಸಹಿ ಪ್ರಾಂಶುಪಾಲರು

Hurry Up Apply Now Shantiniketan Public School